ಆರ್ ಚಂದ್ರು ನಿರ್ಮಾಣದ "ಒರಿಜಿನಲ್ ಮಾನ್ ಸ್ಟರ್"(OM) ಚಿತ್ರದಲ್ಲಿ ವಸಿಷ್ಠ ಸಿಂಹ
ವಸಿಷ್ಠ ಸಿಂಹ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಈ ವಿಷಯವನ್ನು ತಿಳಿಸಿರುವ ಆರ್ ಸಿ ಸ್ಟುಡಿಯೋಸ್ ಸಂಸ್ಥೆ ವಿಶೇಷ ಪೋಸ್ಟರ್ ಬಿಡಿಗಡೆ ಮಾಡಿ ವಸಿಷ್ಠ ಸಿಂಹ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ.
September 24, 2026 Posted by madhava.keerthymadhava.keerthy
ಕನ್ನಡ ಚಿತ್ರರಂಗದಲ್ಲಿ ಗಡಿ ಭಾಗದ ನೈಜ ಘಟನೆಗಳನ್ನು ಆಧರಿಸಿ ಮೂಡಿಬರುತ್ತಿರುವ ‘ಬಾರ್ಡರ್ ಡೈರೀಸ್’ ಸಿನಿಮಾದ ‘ಯಾರೋ ನೀನು ಯಾರೋ ನೀನು’ ಎಂಬ ಭಾವಪೂರ್ಣ ಹಾಡು ಇತ್ತೀಚೆಗೆ ಬಿಡುಗಡೆಯಾಗಿ ಗಮನ ಸೆಳೆಯುತ್ತಿದೆ. ಹೊಯ್ಸಳ ಫಿಲಂಸ್ ಬ್ಯಾನರ್ ಅಡಿಯಲ್ಲಿ ಹೊಯ್ಸಳ ಕೊಣನೂರು ಅವರು ನಿರ್ಮಿಸಿರುವ ಈ ಚಿತ್ರಕ್ಕೆ ಯುವ ನಿರ್ದೇಶಕ ಎಎಸ್‌ಜಿ (ಶಶಿಕುಮಾರ್) ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಎಎಸ್‌ಜಿ ಅವರೇ ರಚಿಸಿರುವ ಈ ಹಾಡಿಗೆ ಜೂಡಾ ಸ್ಯಾಂಡಿ ಸಂಗೀತ ಒದಗಿಸಿದ್ದು, ಸಿದ್ಧಾರ್ಥ ಬೆಳ್ಮಣ್ಣು ಮತ್ತು ಶ್ರೀಲಕ್ಷ್ಮಿ ಬೆಳ್ಮಣ್ಣು ಧ್ವನಿಯಾಗಿದ್ದಾರೆ.

ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ ನಿರ್ದೇಶಕ ಎಎಸ್‌ಜಿ, ಇದು ಕರ್ನಾಟಕ ಹಾಗೂ ತಮಿಳುನಾಡಿನ ಗಡಿ ಭಾಗವಾದ ಅತ್ತಿಬೆಲೆಯ ಆಚೆಗಿನ ಜನರ ಜೀವನಶೈಲಿ ಮತ್ತು ಅಲ್ಲಿ ತಾವೂ ಕಂಡ ನೈಜ ಪಾತ್ರಗಳನ್ನು ಆಧರಿಸಿದ ಕಥೆಯಾಗಿದೆ ಎಂದು ತಿಳಿಸಿದರು. ಪ್ರೇಮಕಥೆಯ ಎಳೆಯೊಂದಿಗೆ ಸಾಗುವ ಈ ಚಿತ್ರದಲ್ಲಿ ಕ್ರೈಮ್, ಡ್ರಾಮಾ ಹಾಗೂ ಸಾಮಾಜಿಕ ವಾಸ್ತವತೆಗಳ ಸಮ್ಮಿಶ್ರಣವಿದೆ. ಹೊಸೂರು, ತಮಿಳುನಾಡಿನ ಗಡಿಪ್ರದೇಶಗಳು, ಚನ್ನಪಟ್ಟಣ, ಮಾಗಡಿ ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಣ ಪೂರ್ಣಗೊಂಡಿದ್ದು, ಸೆನ್ಸಾರ್ ಪ್ರಕ್ರಿಯೆಯೂ ಮುಗಿದು ಬಿಡುಗಡೆಗೆ ಸಿದ್ಧವಾಗಿದೆ.

ಚಿತ್ರದಲ್ಲಿ ಅಂಜನ್ ನಾಗೇಂದ್ರ ಮತ್ತು ಅಶ್ವಿತಾ ಹೆಗ್ಡೆ ನಾಯಕ-ನಾಯಕಿಯಾಗಿ ಅಭಿನಯಿಸಿದ್ದರೆ, ಗೋಪಾಲಕೃಷ್ಣ ದೇಶಪಾಂಡೆ ಹಾಗೂ ಶಿವರಾಜ್ ಕೆ.ಆರ್. ಪೇಟೆ ಪ್ರಮುಖ ಪಾತ್ರಗಳಲ್ಲಿದ್ದಾರೆ. ಅಚ್ಯುತ್ ಬಿ.ಎಸ್. ಛಾಯಾಗ್ರಹಣ ಹಾಗೂ ಆಕಾಶ್ ಹಿರೇಮಠ ಅವರ ಸಂಕಲನ ಚಿತ್ರಕ್ಕಿದೆ. ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಖ್ಯಾತ ಗೀತರಚನೆಕಾರ ಕವಿರಾಜ್ ಅವರು, ಕಂಟೆಂಟ್ ಆಧಾರಿತ ಹೊಸಬರ ಇಂತಹ ಪ್ರಯತ್ನಗಳಿಗೆ ಬೆಂಬಲ ನೀಡಬೇಕೆಂದು ಕರೆ ನೀಡುತ್ತಾ ಇಡೀ ತಂಡಕ್ಕೆ ಶುಭ ಕೋರಿದರು.
ವಸಿಷ್ಠ ಸಿಂಹ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಈ ವಿಷಯವನ್ನು ತಿಳಿಸಿರುವ ಆರ್ ಸಿ ಸ್ಟುಡಿಯೋಸ್ ಸಂಸ್ಥೆ ವಿಶೇಷ ಪೋಸ್ಟರ್ ಬಿಡಿಗಡೆ ಮಾಡಿ ವಸಿಷ್ಠ ಸಿಂಹ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ.
ನಟ ಕೋಮಲ್ ಕುಮಾರ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ "ರೋಲೆಕ್ಸ್" ಚಿತ್ರದ ಶೀರ್ಷಿಕೆ ಈಗ "ರಿಲ್ಯಾಕ್ಸ್" ಎಂದು ಬದಲಾಗಿದೆ. ಇತ್ತೀಚೆಗೆ ಈ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನೆರವೇರಿತು
ಗೋಲ್ಡನ್ ಮೆಗಾ ಸ್ಟಾರ್ ಗಣೇಶ್ ನಟಿಸಿರುವ "ಬೃಂದಾವಿಹಾರಿ" ಚಿತ್ರದ ಐದನೇ ಹಾಡು ಬೆಂಗಳೂರಿನ ಅರಮನೆ ಆವರಣದಲ್ಲಿ ಅತ್ಯಂತ ವಿಜೃಂಭಣೆಯಿಂದ ಅನಾವರಣಗೊಂಡಿತು. ನಾಡಹಬ್ಬ ದಸರಾ ಸಂದರ್ಭದಲ್ಲಿ ಅಕ್ಟೋಬರ್ 16 ರಂದು ಈ ಬಹು ನಿರೀಕ್ಷಿತ ಚಿತ್ರ ತೆರೆಗೆ ಬರಲಿದೆ.
'ಹೊಸದುರ್ಗ ಪ್ರೊಡಕ್ಷನ್ಸ್' ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿರುವ ಹಾಗೂ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿರುವ 'ತ್ರಿಕಾರಂ' (Trikaram) ಚಿತ್ರದ ಟ್ರೇಲರ್ ಬಿಡುಗಡೆ ಹಾಗೂ ಮಾಧ್ಯಮ ಗೋಷ್ಠಿ ಇತ್ತೀಚೆಗೆ ಯಶಸ್ವಿಯಾಗಿ ನೆರವೇರಿತು.
ಮೂರನೇ ವಾರದತ್ತ ಸಾಗುತ್ತಿರುವ ಈ ಚಿತ್ರದ ಪ್ರದರ್ಶನದ ಬಗ್ಗೆ, ತಾವು ಸ್ವೀಕರಿಸಿದ ಮೆಚ್ಚುಗೆ ಪ್ರಶಂಸೆಯ ಬಗ್ಗೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ತಮ್ಮ ಸೋಶಿಯಲ್ ಮೀಡಿಯಾ ಪೋಸ್ಟ್ ನಲ್ಲಿ ಮಾಹಿತಿ ಹಂಚಿಕೊಂಡರು.
ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಖ್ಯಾತ ಗೀತರಚನೆಕಾರ ಕವಿರಾಜ್ ಅವರು, ಕಂಟೆಂಟ್ ಆಧಾರಿತ ಹೊಸಬರ ಇಂತಹ ಪ್ರಯತ್ನಗಳಿಗೆ ಬೆಂಬಲ ನೀಡಬೇಕೆಂದು ಕರೆ ನೀಡುತ್ತಾ ಇಡೀ ತಂಡಕ್ಕೆ ಶುಭ ಕೋರಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಕ್ಲಿಕ್ ಮಾಡಿ