Cineduniya.in | Kannada Film News Portal
Cineduniya | Kannada Movies Portal
Place your advertisement with Cineduniya.in - trusted news portal for kannada films
LATEST NEWS

Cinema isn't just entertainment for us—it's our culture. Help us build the ultimate digital stage for Sandalwood. Buy us a Coffee                        This platform is built by true fans of Sandalwood, for true fans of Sandalwood. Help us bring it to life - Donate us

ಸಿನಿಮಾ ಸುದ್ಧಿ

ಶನೀಲ್ ಗೌತಮ್ ಅಭಿನಯದ ‘ಶ್ರೀರಾಮಚಂದ್ರ’ ಚಿತ್ರದ ಪೋಸ್ಟರ್ ಬಿಡುಗಡೆ

November 1, 2026     Posted by madhava.keerthymadhava.keerthy

‘ಸು ಫ್ರಮ್ ಸೋ’ ಚಿತ್ರದಲ್ಲಿ ರವಿ ಅಣ್ಣನ ಪಾತ್ರದ ಮೂಲಕ ಗಮನ ಸೆಳೆದಿದ್ದ ಶನೀಲ್ ಗೌತಮ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ, ಅವರ ಅಭಿನಯದ ನೂತನ ‘ಶ್ರೀರಾಮಚಂದ್ರ’ ಚಿತ್ರದ ಶೀರ್ಷಿಕೆ ಮತ್ತು ಪೋಸ್ಟರ್ ಅನ್ನು ಚಿತ್ರತಂಡ ಅಧಿಕೃತವಾಗಿ ಅನಾವರಣಗೊಳಿಸಿದೆ.

ಈ ಚಿತ್ರವು ಸಂಪೂರ್ಣ ಕೌಟುಂಬಿಕ ಮನರಂಜನಾ ಕಥಾಹಂದರವನ್ನು ಹೊಂದಿದ್ದು, ಕುಟುಂಬದ ಸಂಬಂಧಗಳು, ಭಾವನೆಗಳು, ಅಣ್ಣ-ತಂಗಿಯರ ನಡುವಿನ ತುಂಟಾಟ ಹಾಗೂ ನಗುವಿನ ಸನ್ನಿವೇಶಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಉದಯ್ ಕೆ. ಮೆಹ್ತ ಅವರು ಈ ಚಿತ್ರದ ಮೂಲ ಕಥೆಯನ್ನು ರೂಪಿಸಿದ್ದು, ನಿರ್ದೇಶಕ ಚಂದ್ರಮೋಹನ್ ಹಾಗೂ ಶನೀಲ್ ಗೌತಮ್ ಸೇರಿ ಮಂಗಳೂರಿನಲ್ಲಿ ಸುಮಾರು ಐದಾರು ತಿಂಗಳುಗಳ ಕಾಲ ಶ್ರಮಿಸಿ ಚಿತ್ರಕಥೆಯನ್ನು ಸಿದ್ಧಪಡಿಸಿದ್ದಾರೆ. ಹಲವು ಕಥೆಗಳ ಪರಿಶೀಲನೆಯ ನಂತರ ನಿರ್ಮಾಪಕ ಬಿ.ಕೆ. ಗಂಗಾಧರ್ ಅವರು ಈ ಕಥೆಯನ್ನು ಆಯ್ಕೆ ಮಾಡಿಕೊಂಡು ನಿರ್ಮಾಣಕ್ಕೆ ಮುಂದಾಗಿದ್ದಾರೆ.

Shaneel Goutham in Shree Ramachandra
First Look Poster of Shaneel Goutham in Shree Ramachandra

ಚಿತ್ರದಲ್ಲಿ ಉಡುಪಿ ಮೂಲದ ಪರಿಪೂರ್ಣ ಚಂದ್ರಶೇಖರ್ ನಾಯಕಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಹಾಗೆಯೇ, ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’ ಖ್ಯಾತಿಯ ಪ್ರವೀಣ್, ಪ್ರಕಾಶ್ ತುಮಿನಾಡ್ ಮತ್ತು ದೀಪಕ್ ರೈ ಪಾಣಾಜೆ ಪ್ರಮುಖ ಪಾತ್ರಗಳಲ್ಲಿದ್ದಾರೆ. ಛಾಯಾಗ್ರಹಣವನ್ನು ಚಂದ್ರಸೇಖರನ್ ಹಾಗೂ ಸಂಗೀತ ನಿರ್ದೇಶನವನ್ನು ಲಿಖಿತ್ ಪ್ರಸಾದ್ ಶೆಟ್ಟಿ ನಿರ್ವಹಿಸುತ್ತಿದ್ದು, ಚಿತ್ರದಲ್ಲಿ ಒಟ್ಟು ಐದು ಹಾಡುಗಳಿರಲಿವೆ. ‘ಸು ಫ್ರಮ್ ಸೋ’ ಚಿತ್ರತಂಡದ ಬಹುಪಾಲು ತಂತ್ರಜ್ಞರು ಮತ್ತು ಕಲಾವಿದರು ಈ ಸಿನಿಮಾದಲ್ಲಿಯೂ ಭಾಗಿಯಾಗಿದ್ದಾರೆ. ಸದ್ಯ ಚಿತ್ರೀಕರಣವು ಅಂತಿಮ ಹಂತದಲ್ಲಿದ್ದು, ಇನ್ನು ಇಪ್ಪತ್ತು ದಿನಗಳಲ್ಲಿ ಸಂಪೂರ್ಣ ಚಿತ್ರೀಕರಣ ಮುಕ್ತಾಯಗೊಳ್ಳಲಿದೆ.


ಸಿನಿಮಾ ಸುದ್ಧಿ

Shaneel Goutham in Shree Ramachandra

ಶನೀಲ್ ಗೌತಮ್ ಅಭಿನಯದ ‘ಶ್ರೀರಾಮಚಂದ್ರ’ ಚಿತ್ರದ ಪೋಸ್ಟರ್ ಬಿಡುಗಡೆ

‘ಸು ಫ್ರಮ್ ಸೋ’ ಚಿತ್ರದಲ್ಲಿ ರವಿ ಅಣ್ಣನ ಪಾತ್ರದ ಮೂಲಕ ಗಮನ ಸೆಳೆದಿದ್ದ ಶನೀಲ್ ಗೌತಮ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ, ಅವರ ಅಭಿನಯದ ನೂತನ ‘ಶ್ರೀರಾಮಚಂದ್ರ’ ಚಿತ್ರದ ಶೀರ್ಷಿಕೆ ಮತ್ತು ಪೋಸ್ಟರ್ ಅನ್ನು ಚಿತ್ರತಂಡ ಅಧಿಕೃತವಾಗಿ ಅನಾವರಣಗೊಳಿಸಿದೆ.

On Duty Film Shooting

ವಿಜಯ್ ರಾಘವೇಂದ್ರ 'ಆನ್ ಡ್ಯೂಟಿ'ಯಲ್ಲಿ ಭರ್ಜರಿ ಸಾಹಸ

ವಿಜಯ್ ರಾಘವೇಂದ್ರ, ತೆಲುಗು ನಟ ಕೃಷ್ಣ ಸಾಯಿ ಮುಖ್ಯ ಭೂಮಿಕೆಯಲ್ಲಿ ಅಭಿನಯ ಮಾಡಿರುವ 'ಆನ್ ಡ್ಯೂಟಿ' ಚಿತ್ರದ ಸಾಹಸ ಸನ್ನಿವೇಶ ಚಿತ್ರೀಕರಣ ಇತ್ತೀಚೆಗೆ ಬೆಂಗಳೂರಿನ ಮಾಗಡಿ ರಸ್ತೆಯ ಕಡಬಗೆರೆಯ ಶ್ರೀ ಭೈರವೇಶ್ವರ ಸಾಮಿಲ್‌ನಲ್ಲಿ ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನದಲ್ಲಿ ಭರ್ಜರಿಯಾಗಿ ಸೆರೆ ಹಿಡಿಯಲಾಗುತ್ತಿತ್ತು. ಈ ಸಂದರ್ಭದಲ್ಲಿ ಮಾಧ್ಯಮದವರು ಸೆಟ್‌ಗೆ ಬೇಟೆ ನೀಡಿದೇವು.

Vashista Simha in Origonal MOnster

ಆರ್ ಚಂದ್ರು ನಿರ್ಮಾಣದ "ಒರಿಜಿನಲ್ ಮಾನ್ ಸ್ಟರ್"(OM) ಚಿತ್ರದಲ್ಲಿ ವಸಿಷ್ಠ ಸಿಂಹ

ವಸಿಷ್ಠ ಸಿಂಹ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಈ ವಿಷಯವನ್ನು ತಿಳಿಸಿರುವ ಆರ್ ಸಿ ಸ್ಟುಡಿಯೋಸ್ ಸಂಸ್ಥೆ ವಿಶೇಷ ಪೋಸ್ಟರ್ ಬಿಡಿಗಡೆ ಮಾಡಿ ವಸಿಷ್ಠ ಸಿಂಹ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ.

Rolex song release

ಹಾಡುಗಳ ಮೂಲಕ ಎಲ್ಲರ ಗಮನ ಸೆಳೆದಿರುವ "ರಿಲ್ಯಾಕ್ಸ್"

ನಟ ಕೋಮಲ್ ಕುಮಾರ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ "ರೋಲೆಕ್ಸ್" ಚಿತ್ರದ ಶೀರ್ಷಿಕೆ ಈಗ "ರಿಲ್ಯಾಕ್ಸ್" ಎಂದು ಬದಲಾಗಿದೆ. ಇತ್ತೀಚೆಗೆ ಈ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನೆರವೇರಿತು

Brundhavihaari Film Song Release in Palace Grounds

ಅದ್ದೂರಿಯಾಗಿ ಅನಾವರಣಗೊಂಡ "ಬೃಂದಾವಿಹಾರಿ" ಚಿತ್ರದ ಐದನೇ ಹಾಡು

ಗೋಲ್ಡನ್ ಮೆಗಾ ಸ್ಟಾರ್ ಗಣೇಶ್ ನಟಿಸಿರುವ "ಬೃಂದಾವಿಹಾರಿ" ಚಿತ್ರದ ಐದನೇ ಹಾಡು ಬೆಂಗಳೂರಿನ ಅರಮನೆ ಆವರಣದಲ್ಲಿ ಅತ್ಯಂತ ವಿಜೃಂಭಣೆಯಿಂದ ಅನಾವರಣಗೊಂಡಿತು. ನಾಡಹಬ್ಬ ದಸರಾ ಸಂದರ್ಭದಲ್ಲಿ ಅಕ್ಟೋಬರ್ 16 ರಂದು ಈ ಬಹು ನಿರೀಕ್ಷಿತ ಚಿತ್ರ ತೆರೆಗೆ ಬರಲಿದೆ.

rtrttrtr

'ತ್ರಿಕಾರಂ' ಟ್ರೇಲರ್ ಬಿಡುಗಡೆ

'ಹೊಸದುರ್ಗ ಪ್ರೊಡಕ್ಷನ್ಸ್' ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿರುವ ಹಾಗೂ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿರುವ 'ತ್ರಿಕಾರಂ' (Trikaram) ಚಿತ್ರದ ಟ್ರೇಲರ್ ಬಿಡುಗಡೆ ಹಾಗೂ ಮಾಧ್ಯಮ ಗೋಷ್ಠಿ ಇತ್ತೀಚೆಗೆ ಯಶಸ್ವಿಯಾಗಿ ನೆರವೇರಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಕ್ಲಿಕ್ ಮಾಡಿ

ಸಿನಿಮಾ ಸ್ಟಿಲ್ಸ್

ಪ್ರೆಸ್ ಮೀಟ್ ಸ್ಟಿಲ್ಸ್