Cineduniya.in | Kannada Film News Portal
Cineduniya | Kannada Movies Portal
Place your advertisement with Cineduniya.in - trusted news portal for kannada films
LATEST NEWS

Cinema isn't just entertainment for us—it's our culture. Help us build the ultimate digital stage for Sandalwood. Buy us a Coffee                        This platform is built by true fans of Sandalwood, for true fans of Sandalwood. Help us bring it to life - Donate us

ಸಿನಿಮಾ ಸುದ್ಧಿ

ವಿಜಯ್ ರಾಘವೇಂದ್ರ ‘ಆನ್ ಡ್ಯೂಟಿ’ಯಲ್ಲಿ ಭರ್ಜರಿ ಸಾಹಸ

October 29, 2026     Posted by madhava.keerthymadhava.keerthy

ವಿಜಯ್ ರಾಘವೇಂದ್ರ, ತೆಲುಗು ನಟ ಕೃಷ್ಣ ಸಾಯಿ ಮುಖ್ಯ ಭೂಮಿಕೆಯಲ್ಲಿ ಅಭಿನಯ ಮಾಡಿರುವ ‘ಆನ್ ಡ್ಯೂಟಿ’ ಚಿತ್ರದ ಸಾಹಸ ಸನ್ನಿವೇಶ ಚಿತ್ರೀಕರಣ ಇತ್ತೀಚೆಗೆ ಬೆಂಗಳೂರಿನ ಮಾಗಡಿ ರಸ್ತೆಯ ಕಡಬಗೆರೆಯ ಶ್ರೀ ಭೈರವೇಶ್ವರ ಸಾಮಿಲ್‌ನಲ್ಲಿ ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನದಲ್ಲಿ ಭರ್ಜರಿಯಾಗಿ ಸೆರೆ ಹಿಡಿಯಲಾಗುತ್ತಿತ್ತು. ಈ ಸಂದರ್ಭದಲ್ಲಿ ಮಾಧ್ಯಮದವರು ಸೆಟ್‌ಗೆ ಬೇಟೆ ನೀಡಿದೇವು. ಆಗ ತಂಡ ಶೂಟಿಂಗ್‌ಗೆ ಬ್ರೇಕ್ ನೀಡಿ ಚಿತ್ರದ ಬಗ್ಗೆ ಮಾಹಿತಿ ನೀಡಲು ಮುಂದಾಯಿತು. ಸಂಜೀವ್ ಮೆಗೋಟಿ ನಿರ್ದೇಶನದ ಈ ಚಿತ್ರವನ್ನು ತೆಲುಗು ನಟ ಮಾಕಿನೇನಿ ಸಾಯಿ ಕೃಷ್ಣರಾಜು ನಿರ್ಮಾಣ ಮಾಡುತ್ತಿದ್ದಾರೆ. ಶೂಟಿಂಗ್ ಸೆಟ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ನಿರ್ದೇಶಕ ಹಾಗೂ ವಿಲನ್ ಪಾತ್ರ ಮಾಡುತ್ತಿರುವ ಸಂಜೀವ್ ಮಾತನಾಡಿ, ‘ತೆಲುಗಿನ ‘ಪೊಲೀಸ್ ಕಂಪ್ಲೇAಟ್’ ಸೇರಿದಂತೆ ಹಲವು ಚಿತ್ರಗಳ ನಿರ್ದೇಶನ ಹಾಗೂ 45ಕ್ಕೂ ಹೆಚ್ಚು ಧಾರಾವಾಹಿಗಳಿಗೆ ಕಥೆ ಬರೆದಿರುವ ಅನುಭವವಿದೆ. ಹನ್ನೆರಡು ವರ್ಷಗಳ ಬಳಿಕ ಕನ್ನಡದಲ್ಲಿ ಚಿತ್ರ ನಿರ್ದೇಶಿಸುತ್ತಿದ್ದೇನೆ. ತಾಯಿ, ಪತ್ನಿ, ಮಕ್ಕಳು ಹಾಗೂ ಕುಟುಂಬಕ್ಕಾಗಿ ಪ್ರತಿಯೊಬ್ಬರೂ ತಮ್ಮದೇ ಆದ ಕರ್ತವ್ಯ ನಿರ್ವಹಿಸುತ್ತಾರೆ. ಆ ಹೊಣೆಗಾರಿಕೆಯ ಭಾವವನ್ನೂ ‘ಆನ್ ಡ್ಯೂಟಿ’ ಶೀರ್ಷಿಕೆ ಪ್ರತಿಬಿಂಬಿಸುತ್ತದೆ. ಈಗಾಗಲೇ ಶೇ.75ಕ್ಕೂ ಅಧಿಕ ಮಾತಿನ ಭಾಗದ ಚಿತ್ರೀಕರಣ ಮುಗಿದಿದ್ದು, ಇನ್ನೂ ನಾಲ್ಕು ಸಾಹಸ ಸನ್ನಿವೇಶಗಳು ಹಾಗೂ ಹಾಡುಗಳ ಚಿತ್ರೀಕರಣ ಬಾಕಿಯಿದೆ’ ಎಂದರು.

On Duty Film Shooting
On Duty Film Shooting

ನಂತರ ನಿರ್ಮಾಪಕ ಹಾಗೂ ನಟ ಕೃಷ್ಣಸಾಯಿ ಮಾತನಾಡಿ, ‘ಚಿತ್ರದಲ್ಲಿ ಸೂರ್ಯ ಮತ್ತು ಚಂದ್ರ ಎಂಬ ಎರಡು ಪ್ರಮುಖ ಪಾತ್ರಗಳಿವೆ. ವಿಜಯ ರಾಘವೇಂದ್ರ ಅವರು ಒಂದು ಪಾತ್ರದಲ್ಲಿ, ನಾನು ಮತ್ತೊಂದು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇವೆ. ನಿರ್ದೇಶಕರು ಉತ್ತಮ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದು, ಈಗಾಗಲೇ ಶೇ.75ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಶೀಘ್ರದಲ್ಲೇ ಚಿತ್ರವನ್ನು ತೆರೆಗೆ ತರುವ ಸಿದ್ಧತೆ ನಡೆಯುತ್ತಿದೆ’ ಎಂದು ತಿಳಿಸಿದರು. ನಾಯಕ ವಿಜಯ ರಾಘವೇಂದ್ರ, ‘ಸಂಜೀವ್ ಮೆಗೋಟಿ ಅವರ ಕಥೆ ನನಗೆ ಬಹಳ ಇಷ್ಟವಾಯಿತು. ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವ ಅಂಶಗಳು ಚಿತ್ರದಲ್ಲಿವೆ. ನನ್ನ ಪಾತ್ರವೂ ವಿಭಿನ್ನವಾಗಿದ್ದು, ಈವರೆಗೂ ಮಾಡಿರದ ಪಾತ್ರ ಎನ್ನಬಹುದು. ‘ಗಣೇಶ ಮತ್ತೆ ಬಂದ’ ಚಿತ್ರದ ಬಳಿಕ ಸುಮಾರು ಇಪ್ಪತ್ತು ವರ್ಷಗಳ ನಂತರ ವಿನಯಾ ಪ್ರಸಾದ್ ಅವರೊಂದಿಗೆ ನಟಿಸುತ್ತಿರುವುದು ಸಂತೋಷ ತಂದಿದೆ. ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನದಲ್ಲಿ ಅಭಿನಯಿಸಿರುವುದು ಖುಷಿ ನೀಡಿದೆ’ ಎಂದು ಹೇಳಿದರು.

Vijay Raghavendra and Smoorti Venkatesh in On Duty
Vijay Raghavendra and Smoorti Venkatesh in On Duty

ನಾಯಕನ ತಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಹಿರಿಯ ನಟಿ ವಿನಯಾ ಪ್ರಸಾದ್, ವಿಜಯ ರಾಘವೇಂದ್ರ ಅವರೊಂದಿಗೆ ಮತ್ತೆ ಅಭಿನಯಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಥ್ರಿಲ್ಲರ್ ಮಂಜು ಮಾತನಾಡಿ, ‘ಚಿತ್ರದ ನಾಲ್ಕು ಸಾಹಸ ಸನ್ನಿವೇಶಗಳಲ್ಲಿ ಮೂರಕ್ಕೆ ಸಾಹಸ ಸಂಯೋಜನೆ ಮಾಡುತ್ತಿದ್ದು, ಸಾಹಸ ನಿರ್ದೇಶನದ ಜೊತೆಗೆ ನಟನೆಯಲ್ಲೂ ಕಾಣಿಸಿಕೊಂಡಿರುವುದಾಗಿ’ ತಿಳಿಸಿದರು. ನಾಯಕಿ ಸ್ಮೃತಿ ವೆಂಕಟೇಶ್, ‘ಇದು ನಾಯಕಿಯಾಗಿ ನಟಿಸುತ್ತಿರುವ ಮೂರನೇ ಚಿತ್ರ’ ಎಂದು ಹೇಳಿದರೆ, ಹಾಡುಗಳ ಕುರಿತು ಆರೋಹಣ ಸುಧೀಂದ್ರ ಮಾಹಿತಿ ನೀಡಿದರು. ಚಿತ್ರಕ್ಕೆ ಹರೀಶ್ ಛಾಯಾಗ್ರಹಣ, ಆರೋಹಣ ಸುಧೀಂದ್ರ ಸಂಗೀತ ನಿರ್ದೇಶನ, ರೇಣುಕಾ ಬಾಬು ಸಂಕಲನ ಹಾಗೂ ಥ್ರಿಲ್ಲರ್ ಮಂಜು ಮತ್ತು ದಿಲೀಪ್ ಸಾಹಸ ಸಂಯೋಜನೆಯಿದೆ. ವಿಜಯ ರಾಘವೇಂದ್ರ, ಕೃಷ್ಣಸಾಯಿ, ಸ್ಮೃತಿ ವೆಂಕಟೇಶ್, ಬೇಬಿ ಅನ್ವಿಕಾ, ಭಾವನಾ ಚಂದ್ರ, ಧರ್ಮ, ಪ್ರೇಮ, ವಿನಯಾ ಪ್ರಸಾದ್, ರವಿಕಿರಣ್, ಥ್ರಿಲ್ಲರ್ ಮಂಜು ಹಾಗೂ ಸಂಜೀವ್ ಮೆಗೋಟಿ ತಾರಾಗಣದಲ್ಲಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ನಟಿ ಭಾವನಾ ಚಂದ್ರ, ಛಾಯಾಗ್ರಾಹಕ ಹರೀಶ್ ಸೇರಿದಂತೆ ಹಲವು ಕಲಾವಿದರು ಹಾಗೂ ತಂತ್ರಜ್ಞರು ಉಪಸ್ಥಿತರಿದ್ದರು.


ಸಿನಿಮಾ ಸುದ್ಧಿ

Shaneel Goutham in Shree Ramachandra

ಶನೀಲ್ ಗೌತಮ್ ಅಭಿನಯದ ‘ಶ್ರೀರಾಮಚಂದ್ರ’ ಚಿತ್ರದ ಪೋಸ್ಟರ್ ಬಿಡುಗಡೆ

‘ಸು ಫ್ರಮ್ ಸೋ’ ಚಿತ್ರದಲ್ಲಿ ರವಿ ಅಣ್ಣನ ಪಾತ್ರದ ಮೂಲಕ ಗಮನ ಸೆಳೆದಿದ್ದ ಶನೀಲ್ ಗೌತಮ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ, ಅವರ ಅಭಿನಯದ ನೂತನ ‘ಶ್ರೀರಾಮಚಂದ್ರ’ ಚಿತ್ರದ ಶೀರ್ಷಿಕೆ ಮತ್ತು ಪೋಸ್ಟರ್ ಅನ್ನು ಚಿತ್ರತಂಡ ಅಧಿಕೃತವಾಗಿ ಅನಾವರಣಗೊಳಿಸಿದೆ.

On Duty Film Shooting

ವಿಜಯ್ ರಾಘವೇಂದ್ರ 'ಆನ್ ಡ್ಯೂಟಿ'ಯಲ್ಲಿ ಭರ್ಜರಿ ಸಾಹಸ

ವಿಜಯ್ ರಾಘವೇಂದ್ರ, ತೆಲುಗು ನಟ ಕೃಷ್ಣ ಸಾಯಿ ಮುಖ್ಯ ಭೂಮಿಕೆಯಲ್ಲಿ ಅಭಿನಯ ಮಾಡಿರುವ 'ಆನ್ ಡ್ಯೂಟಿ' ಚಿತ್ರದ ಸಾಹಸ ಸನ್ನಿವೇಶ ಚಿತ್ರೀಕರಣ ಇತ್ತೀಚೆಗೆ ಬೆಂಗಳೂರಿನ ಮಾಗಡಿ ರಸ್ತೆಯ ಕಡಬಗೆರೆಯ ಶ್ರೀ ಭೈರವೇಶ್ವರ ಸಾಮಿಲ್‌ನಲ್ಲಿ ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನದಲ್ಲಿ ಭರ್ಜರಿಯಾಗಿ ಸೆರೆ ಹಿಡಿಯಲಾಗುತ್ತಿತ್ತು. ಈ ಸಂದರ್ಭದಲ್ಲಿ ಮಾಧ್ಯಮದವರು ಸೆಟ್‌ಗೆ ಬೇಟೆ ನೀಡಿದೇವು.

Vashista Simha in Origonal MOnster

ಆರ್ ಚಂದ್ರು ನಿರ್ಮಾಣದ "ಒರಿಜಿನಲ್ ಮಾನ್ ಸ್ಟರ್"(OM) ಚಿತ್ರದಲ್ಲಿ ವಸಿಷ್ಠ ಸಿಂಹ

ವಸಿಷ್ಠ ಸಿಂಹ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಈ ವಿಷಯವನ್ನು ತಿಳಿಸಿರುವ ಆರ್ ಸಿ ಸ್ಟುಡಿಯೋಸ್ ಸಂಸ್ಥೆ ವಿಶೇಷ ಪೋಸ್ಟರ್ ಬಿಡಿಗಡೆ ಮಾಡಿ ವಸಿಷ್ಠ ಸಿಂಹ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ.

Rolex song release

ಹಾಡುಗಳ ಮೂಲಕ ಎಲ್ಲರ ಗಮನ ಸೆಳೆದಿರುವ "ರಿಲ್ಯಾಕ್ಸ್"

ನಟ ಕೋಮಲ್ ಕುಮಾರ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ "ರೋಲೆಕ್ಸ್" ಚಿತ್ರದ ಶೀರ್ಷಿಕೆ ಈಗ "ರಿಲ್ಯಾಕ್ಸ್" ಎಂದು ಬದಲಾಗಿದೆ. ಇತ್ತೀಚೆಗೆ ಈ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನೆರವೇರಿತು

Brundhavihaari Film Song Release in Palace Grounds

ಅದ್ದೂರಿಯಾಗಿ ಅನಾವರಣಗೊಂಡ "ಬೃಂದಾವಿಹಾರಿ" ಚಿತ್ರದ ಐದನೇ ಹಾಡು

ಗೋಲ್ಡನ್ ಮೆಗಾ ಸ್ಟಾರ್ ಗಣೇಶ್ ನಟಿಸಿರುವ "ಬೃಂದಾವಿಹಾರಿ" ಚಿತ್ರದ ಐದನೇ ಹಾಡು ಬೆಂಗಳೂರಿನ ಅರಮನೆ ಆವರಣದಲ್ಲಿ ಅತ್ಯಂತ ವಿಜೃಂಭಣೆಯಿಂದ ಅನಾವರಣಗೊಂಡಿತು. ನಾಡಹಬ್ಬ ದಸರಾ ಸಂದರ್ಭದಲ್ಲಿ ಅಕ್ಟೋಬರ್ 16 ರಂದು ಈ ಬಹು ನಿರೀಕ್ಷಿತ ಚಿತ್ರ ತೆರೆಗೆ ಬರಲಿದೆ.

rtrttrtr

'ತ್ರಿಕಾರಂ' ಟ್ರೇಲರ್ ಬಿಡುಗಡೆ

'ಹೊಸದುರ್ಗ ಪ್ರೊಡಕ್ಷನ್ಸ್' ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿರುವ ಹಾಗೂ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿರುವ 'ತ್ರಿಕಾರಂ' (Trikaram) ಚಿತ್ರದ ಟ್ರೇಲರ್ ಬಿಡುಗಡೆ ಹಾಗೂ ಮಾಧ್ಯಮ ಗೋಷ್ಠಿ ಇತ್ತೀಚೆಗೆ ಯಶಸ್ವಿಯಾಗಿ ನೆರವೇರಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಕ್ಲಿಕ್ ಮಾಡಿ

ಸಿನಿಮಾ ಸ್ಟಿಲ್ಸ್

ಪ್ರೆಸ್ ಮೀಟ್ ಸ್ಟಿಲ್ಸ್