Cineduniya.in | Kannada Film News Portal
Cineduniya | Kannada Movies Portal
ramayana ad
LATEST NEWS

Cinema isn't just entertainment for us—it's our culture. Help us build the ultimate digital stage for Sandalwood. Buy us a Coffee                        This platform is built by true fans of Sandalwood, for true fans of Sandalwood. Help us bring it to life - Donate us

ಸಿನಿಮಾ ಸುದ್ಧಿ

‘ಊರಬ್ಬ’ ಚಿತ್ರದ ವಿಮರ್ಶೆ : ಜನಸಾಗರ ಸಂಭ್ರಮ ಮತ್ತು ಭ್ರಾತೃತ್ವದ ಅನಾವರಣ

June 20, 2026     Posted by madhava.keerthymadhava.keerthy

ವಿಭಿನ್ನ ಸಂಸ್ಕೃತಿ ಮತ್ತು ಹಿನ್ನೆಲೆಗಳ ಜನರ ಸಮ್ಮಿಲನವು ಒಂದು ಹಬ್ಬಕ್ಕೆ ತರುವ ಕಳೆಯನ್ನು ಈ ಚಿತ್ರ ಅತ್ಯಂತ ಮನೋಜ್ಞವಾಗಿ ಹಿಡಿದಿಟ್ಟಿದೆ. ನಿರಂತರ ಆತಂಕ ಹಾಗೂ ಅನಿಶ್ಚಿತತೆಗಳ ನಡುವೆ ತೊಳಲಾಡುವ ಮನುಷ್ಯನ ಬದುಕಿಗೆ ಇಂತಹ ಹಬ್ಬಗಳು ಹೊಸ ಚೈತನ್ಯವನ್ನು ನೀಡುತ್ತವೆ ಎಂಬುದನ್ನು ಸಿನಿಮಾ ಮಾರ್ಮಿಕವಾಗಿ ನೆನಪಿಸುತ್ತದೆ. ಉಜ್ಜನಿ ಎಂಬ ಹಳ್ಳಿಯಲ್ಲಿ ನಡೆಯುವ ಚೌಡೇಶ್ವರಿ ದೇವಿಯ ಜಾತ್ರೆಯು ಕೇವಲ ಒಂದು ಧಾರ್ಮಿಕ ಆಚರಣೆಯಾಗಿ ಉಳಿಯದೆ, ವಿಭಿನ್ನ ಸಂಸ್ಕೃತಿಗಳ ಭವ್ಯ ಸಂಗಮವಾಗಿ ಇಲ್ಲಿ ಮೂಡಿಬಂದಿದೆ. ಕುವೆಂಪು ಅವರ ‘ಸರ್ವ ಜನಾಂಗದ ಶಾಂತಿಯ ತೋಟ’ ಎಂಬ ಆಶಯದಂತೆ, ಜಾತಿ-ಮತಗಳ ಬೇಧವನ್ನು ಮರೆತು ಎಲ್ಲರೂ ಒಂದಾಗುವ ದೃಶ್ಯಗಳು ಇಲ್ಲಿವೆ. ಅದರಲ್ಲೂ ದಲಿತರು ಬ್ರಾಹ್ಮಣರಾಗುವ ಸಂಪ್ರದಾಯ ಮತ್ತು ವಿವಿಧ ವೇಷಗಳನ್ನು ಧರಿಸಿ ಭ್ರಾತೃತ್ವವನ್ನು ಸಾರುವ ಆಚರಣೆಗಳು ಸಮಾನತೆಯ ಸಂಕೇತವಾಗಿ ಗಮನ ಸೆಳೆಯುತ್ತವೆ.

Oorabba Film Review
Oorabba Film Review

ಜಾತ್ರೆಯ ಹಿನ್ನೆಲೆಯಲ್ಲಿ ಸಾಗುವ ಚಿತ್ರದ ಉಪಕಥೆಗಳು ಮಾನವೀಯತೆಯ ವಿಭಿನ್ನ ಮಜಲುಗಳನ್ನು ಪರಿಚಯಿಸುತ್ತವೆ. ದೂರದ ಊರಿನಿಂದ ಬಂದ ನೆಂಟರು, ವಿಧಿಯ ಆಟಕ್ಕೆ ಸಿಲುಕಿ ನೊಂದು ಹೆಣ್ಣೊಬ್ಬಳು ಕಳ್ಳನೊಬ್ಬನ ಮಾನವೀಯ ಗುಣಕ್ಕೆ ಮನಸೋಲುವ ಪ್ರಸಂಗ, ಬೀಗರಿಬ್ಬರ ನಡುವಿನ ಕಳ್ಳಾಟದ ವಾಸ್ತವಗಳು ಕಥೆಗೆ ಜೀವ ತುಂಬಿವೆ. ಮಾಂಸಕ್ಕಿಂತ ಮಾನವೀಯತೆಯೇ ಮುಖ್ಯ ಎಂದು ನಂಬುವ ಜುಗ್ಗಪ್ಪನ ಪಾತ್ರ ಹಾಗೂ ಪೊಲೀಸರ ಹುಡುಕಾಟದ ನಡುವೆಯೂ ವ್ಯಕ್ತವಾಗುವ ಮಾನವೀಯ ಅನುಕಂಪದ ನೆಲೆಗಳು ಪ್ರೇಕ್ಷಕರ ಮನಸ್ಸನ್ನು ಮುಟ್ಟುತ್ತವೆ. ಉಜ್ಜನಿಯ ಜಾತ್ರೆ ಮತ್ತು ಕೊಂಡದ ವೈಭವವನ್ನು ಚಿತ್ರತಂಡ ಅತ್ಯಂತ ತಾಳ್ಮೆಯಿಂದ ಚಿತ್ರೀಕರಿಸಿದ್ದು, ಇದು ಬೆಳ್ಳಿತೆರೆಯ ಮೇಲೆ ದೃಶ್ಯ ವೈಭವವನ್ನೇ ಸೃಷ್ಟಿಸಿದೆ.

ಚಿತ್ರದ ಕೆಲವು ಉಪಕಥೆಗಳಲ್ಲಿ ಕೊಂಚ ಜಾಳುತನವಿದ್ದರೂ ಮತ್ತು ಹಿನ್ನೆಲೆ ಸಂಗೀತದಲ್ಲಿ ಅಲ್ಲಲ್ಲಿ ಏರುಪೇರಾಗಿದ್ದರೂ, ಒಟ್ಟಾರೆಯಾಗಿ ‘ಊರಬ್ಬ’ ಚಿತ್ರವು ಉತ್ತಮ ಮನರಂಜನೆಯನ್ನು ನೀಡುತ್ತದೆ. ನಿರ್ದೇಶಕ ಲಕ್ಕಿ ಶಂಕರ್ ಮತ್ತು ಅವರ ತಂಡದ ಎರಡು ಮೂರು ವರ್ಷಗಳ ಕಠಿಣ ಪರಿಶ್ರಮ ಪರದೆಯ ಮೇಲೆ ಎದ್ದು ಕಾಣುತ್ತದೆ. ಮುಖ್ಯವಾಗಿ ಎಂಟು ಕ್ಯಾಮೆರಾಗಳನ್ನು ಬಳಸಿ ಇಡೀ ಜಾತ್ರೆಯ ವಾತಾವರಣವನ್ನೇ ಕಣ್ಣಿಗೆ ಕಟ್ಟುವಂತೆ ಮಾಡಿರುವ ಛಾಯಾಗ್ರಾಹಕ ಕೃಷ್ಣಕುಮಾರ್ (ಕೆ.ಕೆ) ಅವರ ಕೆಲಸ ಶ್ಲಾಘನೀಯ. ಯಾವುದೇ ಅತಿರೇಕದ ಹೀರೋಯಿಸಂ ಇಲ್ಲದೆ ನಟಿಸಿರುವ ನರೇಶ್ ಗೌಡರ ಪಾತ್ರ ಮತ್ತು ಚಿತ್ರದ ನಿರ್ಮಾಣದ ಜವಾಬ್ದಾರಿ ಮೆಚ್ಚುವಂತದ್ದಾಗಿದೆ. ಉಳಿದಂತೆ ದೊಡ್ಡಣ್ಣ, ಮಿಮಿಕ್ರಿ ಗೋಪಿ, ಬಿರಾದಾರ್, ಬ.ಲ.ರಾಜವಾಡಿ, ಅರವಿಂದ ರಾವ್, ತನಿಷಾ ಕೊಪ್ಪಂಡ, ಮಿತ್ರಾ, ಸಿದ್ದು ಮೂಲಿಮನಿ ಮತ್ತು ಪಾಯಲ್ ಚಂಗಪ್ಪ ಅವರ ನಟನೆ ಕಥೆಗೆ ಪೂರಕವಾಗಿದೆ. ಇದರೊಂದಿಗೆ ಎಂ.ಡಿ.ಶ್ರೀಧರ್, ಹೆಚ್.ವಾಸು ಹಾಗೂ ಬಾಹುಬಲಿ ಅವರಂತಹ ಅನುಭವಿ ನಿರ್ದೇಶಕರು ತಾಂತ್ರಿಕ ವಿಭಾಗದಲ್ಲಿ ಕೈಜೋಡಿಸಿರುವುದು ಚಿತ್ರದ ಬಲವನ್ನು ಮತ್ತಷ್ಟು ಹೆಚ್ಚಿಸಿದೆ.


ಸಿನಿಮಾ ಸುದ್ಧಿ

Ayush Upendra Film Controversy Resolved

ಉಪೇಂದ್ರ ಪುತ್ರ ಆಯುಷ್ ಚೊಚ್ಚಲ ಚಿತ್ರದ ವಿವಾದ ಸುಖಾಂತ್ಯ!

ಪ್ರಿಯಾಂಕಾ ಉಪೇಂದ್ರ ಅವರ ಪುತ್ರ ಆಯುಷ್ ನಾಯಕನಾಗಿ ಪದಾರ್ಪಣೆ ಮಾಡುತ್ತಿರುವ ಚೊಚ್ಚಲ ಸಿನಿಮಾದ ಸುತ್ತ ಕಳೆದ ಕೆಲವು ದಿನಗಳಿಂದ ಎದ್ದಿದ್ದ ವಿವಾದಕ್ಕೆ ಕೊನೆಗೂ ತೆರೆ ಬಿದ್ದಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ (KFCC) ಮಧ್ಯಸ್ಥಿಕೆಯಲ್ಲಿ ನಡೆದ ಸಂಧಾನ ಸಭೆ ಯಶಸ್ವಿಯಾಗಿದ್ದು, ನಿರ್ಮಾಪಕರು ಮತ್ತು ನಿರ್ದೇಶಕರ ನಡುವಿನ ಭಿನ್ನಾಭಿಪ್ರಾಯಗಳು ಪರಸ್ಪರ ಒಪ್ಪಂದದ ಮೂಲಕ ಬಗೆಹರಿದಿವೆ.

Ayush Film Controversy

ಫಿಲಂ ಚೇಂಬರ್ ಅಂಗಳದಲ್ಲಿ ಆಯುಷ್ ಚೊಚ್ಚಲ ಚಿತ್ರದ ನಿರ್ದೇಶಕರ ವಿವಾದ

ರಿಯಲ್ ಸ್ಟಾರ್ ಉಪೇಂದ್ರ ಅವರ ಪುತ್ರ ಆಯುಷ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿರುವ ಚೊಚ್ಚಲ ಸಿನಿಮಾ ಇದೀಗ ನಿರ್ದೇಶಕರ ಬದಲಾವಣೆ ವಿವಾದದಿಂದ ಸುದ್ದಿಯಲ್ಲಿದೆ. ಚಿತ್ರದ ಸುಮಾರು ಶೇ.40ರಷ್ಟು ಚಿತ್ರೀಕರಣ ಪೂರ್ಣಗೊಂಡಿರುವ ಹಂತದಲ್ಲಿ ನಿರ್ದೇಶಕ ಪುರುಷೋತ್ತಮ್ ಅವರನ್ನು ಕೈಬಿಟ್ಟಿರುವುದು ವಿವಾದಕ್ಕೆ ಕಾರಣವಾಗಿದೆ

Cini Mini Short Film Festival

ನವೆಂಬರ್ 20 ಮತ್ತು 22ರಂದು ‘ಸಿನಿ ಮಿನಿ ಸೀಸನ್–2’ ಕನ್ನಡ ಕಿರುಚಿತ್ರೋತ್ಸವ

ಕನ್ನಡ ಚಿತ್ರರಂಗದ ನಾಳಿನ ಭರವಸೆಗಳಾದ ಯುವ ಪ್ರತಿಭೆಗಳ ಕನಸುಗಳಿಗೆ ರೆಕ್ಕೆ ನೀಡುವ ಈ ಕಿರುಚಿತ್ರೋತ್ಸವ, ಹೊಸ ಸೃಜನಶೀಲತೆಗೆ ವೇದಿಕೆಯಾಗಲಿದೆ. ಉದಯೋನ್ಮುಖ ನಿರ್ದೇಶಕರು, ಕಲಾವಿದರು ಹಾಗೂ ತಂತ್ರಜ್ಞರ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಈ ವಿಶೇಷ ಸಿನಿಮಾ ಸಂಭ್ರಮಕ್ಕೆ ಚಿತ್ರರಂಗದ ಗಣ್ಯರು, ನಿರ್ಮಾಪಕರು, ನಿರ್ದೇಶಕರು ಹಾಗೂ ಸಿನಿಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಹೊಸ ಪ್ರತಿಭೆಗಳ ಕನಸುಗಳಿಗೆ ಬೆಂಬಲವಾಗಿ ನಿಲ್ಲುವಂತೆ ಸಿನಿ ಮಿನಿ ತಂಡ ಆತ್ಮೀಯ ಆಹ್ವಾನ ನೀಡಿದೆ.

Ram Raheem

‘ರಾಮ್ ರಹೀಮ್’ ಟ್ರೇಲರ್ ಬಿಡುಗಡೆ ಮಾಡಿದ ಕೆ. ಮಂಜು; ಸ್ನೇಹದ ಕಥೆಗೆ ನಮ್ ಋಷಿ ನಿರ್ದೇಶನ

ನಮ್ ಋಷಿ ಕಥೆ, ಚಿತ್ರಕಥೆ, ನಿರ್ದೇಶನ ಹಾಗೂ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ‘ರಾಮ್ ರಹೀಮ್’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇತ್ತೀಚೆಗೆ ಚಿತ್ರದ ಟ್ರೇಲರ್ ಅನ್ನು ಖ್ಯಾತ ನಿರ್ಮಾಪಕ ಕೆ. ಮಂಜು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

Salfie Saroja Song Release

‘ಜಾಕಿ 42’ ಚಿತ್ರದ ‘ಸೆಲ್ಫಿ ಸರೋಜ’ ಹಾಡು ಬಿಡುಗಡೆ

ವಿಭಿನ್ನ ಕಥಾವಸ್ತು ಹಾಗೂ ಕುತೂಹಲಕಾರಿ ಪ್ರಚಾರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಗಮನ ಸೆಳೆಯುತ್ತಿರುವ ‘ಜಾಕಿ 42’ ಚಿತ್ರದ ಮತ್ತೊಂದು ವಿಶೇಷ ಹಾಡು ಬಿಡುಗಡೆಯಾಗಿದೆ. ‘ಸೆಲ್ಫಿ ಸರೋಜ’ ಎಂಬ ಶೀರ್ಷಿಕೆಯ ಈ ಹಾಡಿನಲ್ಲಿ ಬಾಂಬೆ ಮೂಲದ ನಟಿ ಕೃತಿ ವರ್ಮ ಬಣ್ಣದ ಲೋಕದಲ್ಲಿ ಮಿಂಚಿದ್ದು, ತಮ್ಮ ಆಕರ್ಷಕ ನೃತ್ಯದ ಮೂಲಕ ಗಮನ ಸೆಳೆದಿದ್ದಾರೆ.

ererewrwer

'ಲಕ್ಷ್ಮೀಪುತ್ರ' ಟ್ರೇಲರ್ ನೋಡಿ, ಮೆಚ್ಚಿದ ಶಿವಣ್ಣ

ಕೌಟುಂಬಿಕ ಭಾವನೆಗಳು, ಹಾಸ್ಯ ಹಾಗೂ ಸಾಹಸಮಯ ಅಂಶಗಳನ್ನು ಒಳಗೊಂಡಿರುವ ಚಿಕ್ಕಣ್ಣ ಅಭಿನಯದ 'ಲಕ್ಷ್ಮೀಪುತ್ರ' ಚಿತ್ರದ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದ್ದು, ಇದೇ ನವೆಂಬರ್ 27ರಂದು ರಾಜ್ಯಾದ್ಯಂತ ಸಿನಿಮಾ ತೆರೆಕಾಣಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಕ್ಲಿಕ್ ಮಾಡಿ

ಸಿನಿಮಾ ಸ್ಟಿಲ್ಸ್

ಪ್ರೆಸ್ ಮೀಟ್ ಸ್ಟಿಲ್ಸ್